ಶನಿವಾರ, ಜುಲೈ 12, 2014

ಮುಂಗಾರು ಮಳೆ

ನಾ ಯಾವಾಗಲು ಯೋಚಿಸುತ್ತಿದ್ದೆ 
ಮುಂಗಾರು ಮಳೆ ಎಲ್ಲರ ಜೀವನದಲ್ಲೂ 
ಒಂದು ಸವಿ ನೆನೆಪ ತಂದಿದೆಯೆಂದು ಹೇಳುತಿದ್ದಾಗ 
ನಾ ಅದೆಂತಹ ಹುಚ್ಚು ಎಂದು ತಿಳಿದಿದ್ದೆ 
ಆದರೆ ನನ್ನಲ್ಲೂ ಒಂದು ಸಿಹಿ ನೆನಪನ್ನ ಮೂಡಿಸಿಯೇ ಬಿಟ್ಟಿತು 
ಈ ಮುಂಗಾರು ನನ್ನಿನಿಯನ ಜೊತೆ ನಾ ಇದ್ದಹಾಗೆ 
ಕನಸನ್ನು ಕಂಡಿದ್ದೆ ನಿನ್ನೆಯ ರಾತ್ರಿ 
ನನ್ನಗೆ ಪ್ರತಿ ಬಾರಿ ಮುಂಗಾರು ಮಳೆ ಹೀಗೆಯೇ ಮಾಡುತ್ತಿದೆ !
ನನ್ನೀ ಪಯಣದ ಹಾದಿ ನೀನು .

ನನ್ನ ಮಾತು

ನನ್ನವನ ಮನದ ಮಾತು 
ಕೇಳಿದೆ ನಾನಿಂದು 
ಅವನೆಂದ 
ನಾ ನಿನ್ನ 
ಪ್ರಿತಿಸುತ್ತಿದ್ದೇನೆ ಎಂದು 
ನನಗು ಸಹ 
ಇದೆ ಪ್ರೆಶ್ನೆ ಕೇಳಲು 
ನಾಚಿಕೆಯಿಂದ 
ಉತ್ತರಿಸಲಾಗದೆ 
ನಾನೆಂದೆ 
ನನ್ನ ಮಾತು 
ನೀನು ಈಗಾಗಲೇ 
ಹೇಳಿ ಆಗಿದೆ ಎಂದು.

ಉದಯಿಸು

ಗೆಳೆಯ 
ನನ್ನೀ ಮನದಲಿ 
ಉದಯಿಸುತ್ತಿರುವ 
ನೇಸರ
 ನೀ

ನನ್ನಲ್ಲಿ - ನೀ

ಗೆಳತೀ 
ನನ್ನೀ ಮನದ ಭಾವ ನೀ 
ನನ್ನೀ ಜೀವದ ಉಸಿರು ನೀ 
ನನ್ನೀ ಹೃದಯದ ಮಿಡಿತ ನೀ 
ನನ್ನಲ್ಲಿ ತುಂಬಿದ ಜೀವ ನೀ.

ಮುತ್ತಿನ ಮಳೆ

ನೆನ್ನೆಯ ದಿನ 

ನನ್ನಿನಿಯನ
ಮುತ್ತಿನ ಮಳೆಯಲಿ 
ಮಿಂದ ಅನುಭವ 
ಖುಷಿಯಾಯಿತು 
ಹಾಗೆಯೇ ದುಃಖವೂ 
ನಾ ಮಿಂದಿದ್ದು 
ಕನಸಿನಲ್ಲಿ 
ಎಂದು ನಿದ್ದಯಿಂದ 
ಎದ್ದಾಗ ತಿಳಿದು ಬೇಸರವಾಯಿತು .