ಗುರುವಾರ, ಮೇ 31, 2012

ಕನಸ ಮುತ್ತು

ಮುತ್ತಿಗಾಗಿ ಕಾದಿದ್ದೆ
ಆ-ಕ್ಷಣ ಇನಿಯ ನಾಪತ್ತೆಯಾಗಿದ್ದ
ಕಾದೆ..ಸಂಪರ್ಕಿಸಲು ಪ್ರಯತ್ನಿಸಿ ಸೋತೆ
ಮುತ್ತು ಕೊಡುವವ ಬಂದೆ ಬರುತ್ತಾನೆಂಬುದು
ಹುಸಿಯಾತು ಬರಲಾರನೆಂಬುದು ಖಾತ್ರಿ ಆತು
ಕಾರಣ....
ಬೇರೇನು ಅಲ್ಲ-ನನ್ನ ಕನಸಲ್ಲಿ ಮುತ್ತಿನ ವ್ಯಾಪಾರಿ
ಹೀಗೆ ಬಂದು ಹಾಗೆ ಹೋಗಿದ್ದ
ಮಲಗಿದ್ದ ನಾ ಎಚ್ಚರಗೊಂಡ ಬಳಿಕ
ಕತ್ತು ತಡಕಾಡಿದೆ
ನಮ್ಮೂರಿನ ಜಾತ್ರೆಯಲ್ಲಿ ತಂದಿದ್ದ
ಸರ ಸಿಕ್ಕಿತು
ಮುತ್ತಿನ ಕನಸು ಮುಗಿದಿತ್ತು-ಮುರಿದಿತ್ತು

ಮಂಗಳವಾರ, ಮೇ 29, 2012

ಹುಚ್ಚುಕೋಡಿ ಮನಸ್ಸಿನ ಕನ್ನಡಿಯೊಳಗಿನ ಬಿಂಬ ಪತ್ರ

ಒಂದು ಪತ್ರ ಅಚಾನಕ್ಕಾಗಿ ಎಂದೋ ನನ್ನ ಕೈ ಸೇರಿತ್ತು. ಯಾರು ಯಾರಿಗೆ ಬರೆದದ್ದು ಮತ್ತು ನನಗೆ ಈ ಪತ್ರ ಹೇಗೆ ಸಿಕ್ಕಿತು ಎಂಬುದಿಲ್ಲಿ ಅನಾವಶ್ಯಕ. ಪ್ರೀತಿಯ ನಾನಾ ಮುಖಗಳಲ್ಲಿ ನನಗ್ಯಾಕೋ ಈ ಮುಖವೊಂದು ಹಿಡಿಸಿತ್ತೇನೋ ಹಲವುಭಾರಿ ಈ ಪತ್ರದ ಮೇಲೆ ಕಣ್ಣಾಡಿಸಿದ್ದೇನೆ. ಅದ್ಯಾಕೋ ಬ್ಲಾಗಿನಲ್ಲಿ ಪತ್ರವನ್ನು ಅಂಟಿಸಬೇಕನಿಸಿತು. ಕುತೂಹಲಕ್ಕೊಮ್ಮೆ ಓದಿ. ನನಗಿಷ್ಟವಾದದ್ದು ನಿಮಗೂ ಇಷ್ಟವಾಗಬೇಕೆಂದಿಲ್ಲ. ಅಲ್ಲವೇ.....???


ಮುದ್ದು....
ಮರೆಯಲಾಗದ ಆ ದಿನ ನೆನಪಿದೆಯಲ್ಲ....? ನೀ-ಎನಗೆ ಪ್ರೀತಿ ತಿಳಿಸ ಬಂದಿದ್ದೆ. ವಿಪರ್ಯಾಸವೆಂದರೆ ಆ ಘಳಿಗೆಯಲ್ಲಿ ಅದೇಕೋ ನಿನ್ನ ಮೇಲೆ ನನ್ನೊಳಗೆ ಸಣ್ಣದೊಂದು ಸಿಡುಕು ನನಗರಿವಿಲ್ಲದಂತೆಯೇ ಆವರಿಸಿತ್ತು. ವಿನಾಕಾರಣ ಕೋಪಕ್ಕೋ...ಮುನಿಸಿಗೋ..ಅಸಹನೆಗೋ...ಹೊಸತನಕ್ಕೆ ಒಗ್ಗಿಕೊಳ್ಳುವ ತಹತಹಹಿಕೆಗೋ..ಚಡಪಡಿಕೆಗೋ ಕಾಣೆ ಮೇಲ್ನೋಟಕ್ಕೆ ಕೋಪ ಎನಿಸುವಂತೆ ತೋರುವಂತೆ ಮಾತಿಗೆ ನಿರಾಕರಿಸಿ ನಿನಗೆ ಬೆನ್ನುಮಾಡಿ ನಿನ್ನ ಕೋರಿಕೆ...ಪ್ರೀತಿ..ಆದರ...ಒಲವು..ಮಮತೆ ಎಲ್ಲವನ್ನೂ ಸಾರಸಗಟಾಗಿ ತಿರಸ್ಕಾರವಾಗಿ ಕಂಡು ಬೆಪ್ಪರಬೆರಗಾದೆನೋ ಏನೋ ...ನಿಷ್ಟೂರವಾಗಿ ನಿನ್ನ ಭಾವಿಸಿ ದುಡುಕಿದೆನೋ...ಬೆದರಿದೆನೋ..ಒಟ್ಟಾರೆ ಆ ಕ್ಷಣಕ್ಕೆ ನಿನ್ನ ಸಾಂಗತ್ಯ ಬೇಡ ಎನಿಸಿತು. ನನ್ನ ಮನಸ್ಸು ನಿನ್ನ ಮನಸ್ಸನ್ನು ಆ ವೇಳೆ ಒಪ್ಪಲೇ ಇಲ್ಲ. ಈ ನಡವಳಿಕೆಯೇ ತೆಪ್ಪೋ ನಾ ಕಾಣೆ. ಈಗಿನ ತನಕ ಈ ಬಗ್ಗೆ ಯಾಕೆಂಬ ಪ್ರಶ್ನೆಗೆ ಉತ್ತರವೇ ಧಕ್ಕಿಲ್ಲ. ಬಹುಶಃ ಧಕ್ಕದೂ ಕೂಡ. ಹೌದು ನೀನಾದರೂ ಅದ್ಯಾಕೆ ಮಾತಿಗೆ ಬಲವಂತಿಸಲಿಲ್ಲ ಅಥವ ನೀನೇಕೆ ಮರು ಮಾತಾಡದೆ ಹಾಗೆ ಇದ್ದೆ. ನನ್ನ ವರ್ತನೆ ನಿನಗೆ ಅಸಹ್ಯ ಮೂಡಿಸಿತಾ...???ನನ್ನನ್ನು ಅವಿವೇಕಿ ಎಂದು ಭಾವಿಸಿದೆಯಾ...??? ಆಥವ ಮೊಂಡಿಯಂತ ನನ್ನನ್ನು ಮಾತನಾಡಿಸದಿರುವುದೇ ಒಳಿತೆಂದು ಅನಿಸಿತಾ...??? ಹೇಗೋ ಸ್ನೇಹಿತೆಯಿಂದಾಗಿ ಮನಸ್ತುಸುಗಳ ಕೊಂಡಿ ಬೆಸೆಯಿತು. ಅವಳ ಸಲಹೆ..ಕಾಳಜಿ..ಆಸ್ಥೆ ..ಎಲ್ಲವಕ್ಕೂ ನಾನು ಅಭಾರಿ. ಬೆನ್ನು ಮಾಡಿ ಹೊರಟವಳು ಹಿಂತಿರುಗಿ ನಿನ್ನೆಡೆಗೆ ಮನಸ್ಸು ಮಾಡಿರದಿದ್ದರೆ... ಮುಖಾಮುಖಿಯಾಗದೆ ಇದ್ದಿದ್ದರೆ ....ಬಹುಶಃ ನಿನ್ನ ಪ್ರೀತಿಯ ಪರಿಚಯವೇ ಆಗುತ್ತಿರಲಿಲ್ಲ. ದುಡುಕಿಬಿಡುತಿದ್ದೆ ಅಂತ ಈ ಕ್ಷಣ ಅನಿಸುತ್ತಿದೆ. ಜೊತೆಗೆ ನಿನ್ನ ತಾಳ್ಮೆಯನ್ನು ಮೆಚ್ಚಿದ್ದೇನೆಂದು ತಿಳಿಸಲು ಹರ್ಷಿಸುತ್ತೇನೆ. ಸ್ನೇಹಿತೆಯಿಂದಾಗಿ ನಮ್ಮಿಬ್ಬರ ಪರಿಚಯ...ಮನಸ್ಸು...ಭಾವ ವಿಶ್ವಾಸ...ಬಂಧ ಅರಿಯಲು-ಬೆರೆಯಲು ಸಾಧ್ಯವಾಗಿದೆ. ಅದ್ಯಾಕೆ ಹಾಗಂದೆ...?? ಉಡುಗೊರೆ ಕೈಬದಲಿಸೋ ವೇಳೆ ನೀ ಹೇಳಿದ್ದೇನು "ಅದು ನಿನಗೆ ನೀನು ಪ್ರಿತಿಸುತಿರುವ ಹುಡುಗಿ ನಾನು ಯಾರೆಂದು ತಿಳಿಯದೆ ಕೊಟ್ಟಿದಲ್ಲೆಂದು ಅದು ನಿನ್ನಲಿದ್ದರೆ ಅವಳು ನನ್ನ ಪ್ರಿತಿಸುತಿರುವಳೆಂದು ತಿಳಿಯುತ್ನೆಂತೇನೆಂದು ಹೇಳಿದ್ದೆ" ನೀನು ನನಗರ್ಥ ಆಗೋ ಹಾಗೆ ಹೇಳಲಿಲ್ಲವೋ ....ನಾ ಸರಿ ಅರ್ಥ ಮಾಡಿಕೊಳ್ಳುವಲ್ಲಿ ಎಡವಿದೆನೋ ಕ್ಷಣದ ಕೋಪಕ್ಕೆ ಉಡುಗೊರೆ ಬಲಿಪಶುವಾಯಿತು. ನನಗೆ ಅಗತ್ಯವಿಲ್ಲದ ವಿಚಾರಗಳಲ್ಲಿ ಆಸಕ್ತಿ ಕಮ್ಮಿ. ಅನಾವಶ್ಯಕ ವಿಚಾರಕ್ಕೆ ತಲೆಕೆಡಿಸಿಕೊಳ್ಳಲ್ಲ. ಇದು ನನ್ನ ಮೂಲಸ್ವಭಾವ. ಇದರಿಂದ ನಿನಗೆ ಕಸಿವಿಸಿಯಾಗಿದ್ದರೆ. ಸಣ್ಣ ಕ್ಷಮೆಯಿರಲಿ. ಮಾತಿಗೆ ಒಲ್ಲದ ನಾನು ಮನಸ್ಸನ್ನು ನಿನಗೆ ಕೊಡುತಿದ್ದೇನೆ. ನಿಷ್ಕಲ್ಮಶ ಪ್ರೀತಿಯ ಜೀವಂತಿಕೆ ಸೆಲೆ ಇರುವುದೇ ನಂಬಿಕೆ ...ಕಾಳಜಿ... ವಿಶ್ವಾಸದಲ್ಲಿ. ಮೋಸ-ಕಪಟ- ವಂಚನೆ ಎಲ್ಲದರಿಂದ ಸಮಾನಾಂತರ ಕಾಪಾಡಿಕೊಳ್ಳುವುದಾದರೆ ಮುಂದುವರೆಯೋಣ. ಭರವಸೆಗಳು ಬದುಕಲ್ಲ ...ಕನಸ್ಸುಗಳು ಒಮ್ಮೆ ಒಡೆದರೆ ಜೀವಂತ ಹೆಣದಂತಾಗುತ್ತದೆ ಬದುಕು. ಆಡುವ ಮಾತಿಗೂ..ಕಾಣುವ ಕನಸ್ಸಿಗೂ...ಬದುಕಿಗೂ ಸಾಮಿಪ್ಯವಿರುವಂತಾಗಲಿ. ಹತ್ತುಭಾರಿ ಯೋಚಿಸು ನಾ-ನಿನಗೆ ತಕ್ಕವಳಾ..ಜೀವಕ್ಕೆ ಜೀವವಾಗಿ..ಉಸಿರಿಗೆ ಉಸಿರಾಗಿ... ನನ್ನ ಕಾಪಾಡಲು ನಿನ್ನಿಂದ ಸಾದ್ಯನಾ...??? ಮತ್ತೊಮ್ಮೆ ನಿನ್ನನ್ನು ನೀನೇ ವಿಮರ್ಶಿಸಿಕೋ. ಕಲ್ಲಿನ ಕಟ್ಟಡಗಳೇ ಧರೆಗುರುಳುತ್ತವೆ. ಸುಳ್ಳಿನ ಸೌದಕ್ಕೆ ಆಯಸ್ಸಿಲ್ಲ. ಸುಳ್ಳು-ಮೋಸವೆಂದರೆ ನನಗಲರ್ಜಿ ಕಣೋ. ನನ್ನ ತನದ ಜೊತೆಗೆ ನೀನಿರಬೇಕು. ನಿನಗಾಗಿ ನನ್ನ ಕನಸ್ಸುಗಳು ಸಾಯಕೂಡದು. ಹೊಸ ಕನಸ್ಸುಗಳನ್ನು ತೆರೆಸುವುದಾದರೆ. ನಾನು ನಿನಗೆ ಇಡಿಯಾಗಿ ಧಕ್ಕುತ್ತೇನೆ. ನನ್ನಲ್ಲಿ ಪ್ರೀತಿಯ ಮೊಳಕೆ ಬಿತ್ತಿದ್ದೀಯ. ಅದನ್ನು ಜೋಪಾನವಾಗಿ ಕಾಪಾಡಬಲ್ಲೆಯಾದರೆ ಮುಂದುವರಿ. ನಿನ್ನ ಪ್ರತಿಕ್ರಿಯೆ ಬಯಸುತ್ತೇನೆ. ಕಾಯುತ್ತಿರುತ್ತೇನೆ ಪ್ರತಿ ಕ್ಣಣದ ನಿನ್ನ ನೆನಪಿನೊಂದಿಗೆ. ಉತ್ತರವನ್ನೂ ಬೇಗ ಬರೀ...ಜೀವಮಾನವಿಡಿ ಕಾಯಿಸಲೂ ಬೇಡ-ಸತಾಯಿಸಲು ಬೇಡ. ನಿನ್ನ ಕಾಲ ಹೆಬ್ಬೆರಳಿನಿಂದ ನೆತ್ತಿಕೂದಲ ತನಕ ನಾ ಇಡಿಯಾಗಿ ನಿನ್ನ ಪ್ರೀತಿಸಲು ಶುರುಹಚ್ಚಿಕೊಂಡಿದ್ದೇನೆ. ಬಹುಶಃ ನಿನ್ನನ್ನು ಕಳಕೊಂಡರೆ ನಾ ಹುಚ್ಚಿಯಾಗುತ್ತೇನೋ....?????

ಶುಕ್ರವಾರ, ಮೇ 18, 2012

ನಲ್ಲ
ನಲ್ಲ
ನೀ ನನ್ನ
ಮುಂದು ಕೂತಾಗ
ನೀ ಮುಟ್ಟದೆನೆ 
ನನ್ನ ಮೈ ತುಂಬಾ
ಕಚಕುಳಿ.
ಈ ಪುಟ್ಟ ಜೀವವ
ನಿನ್ನ ಬಾಹು
ಬರಸೆಳೆಯಬಾರದೆ
ನನ್ನ ಪ್ರೀತಿಯ
ಅರಿತು ನಿನ್ನ
ಮೈಯರಳಿ.


ಗುರುವಾರ, ಮೇ 17, 2012

ನನ್ನ ರಾಜನನ್ನ ಕನಸಿನ ರಾಜನೆ

ನಾ ನಿನ್ನ ಪ್ರೀತಿಸುವ ಜೀವ

ಪ್ರೀತಿಯ ಹಿಡಿದಿಟ್ಟು ಕಾಯುತಿರುವೆ,

ನನ್ನಿ ನಿರಿಕ್ಷೆಯೊಂದಿಗಿನ

ಕಾಯುವಿಕೆಗೆ ಫಲವುಣಿಸಲು

ನೀ ಬಂದು ಸ್ವೀಕರಿಸು

ನನ್ನೊಲವ ಪ್ರೀತಿಯ

ನೀ ಒಲ್ಲೆ ಎನದೆ