ಶನಿವಾರ, ಜುಲೈ 28, 2012

ನಿನಗಾಗಿ ಕಾಯುತಿರುವ ಜೀವ

ನಿನಗಾಗಿ ಕಾಯದ ಕ್ಷಣಗಳಿಲ್ಲ
ದಿನಗಳಿಲ್ಲ-ವರ್ಷಗಳಿಲ್ಲ
ಪ್ರತಿ ಕ್ಷಣ ನಿನ್ನ ನಿರೀಕ್ಷೆಯಲ್ಲಿದ್ದೇನೆ
ನಿನ್ನ ಬರುವಿಕೆಗೆ ಕಾಯುತಿದ್ದೇನೆ
ಯಾಕೋ.. ಕಾಯುವಿಕೆಗೂ ಅರ್ಥವಿಲ್ಲ
ಕಹಿಯಾದ ಸತ್ಯ ಅರಿತಿದ್ದೇನೆ
ಇನ್ನೆಂದೂ ನೀ
ಬಾರಲಾರೆ ನನ್ನ ಬಾಳಲ್ಲಿ

ಶುಕ್ರವಾರ, ಜುಲೈ 20, 2012

ಏಕಾಂಗಿ

ಒಂಟಿ ಜೀವನ ಸಾಕಾಗಿದೆ 
ಸ್ನೇಹಿತರಿಲ್ಲ , ಸಂಗಾತಿಯಿಲ್ಲ 
ಸಮುದ್ರದ ಅಲೆಗಳೇ ನನ್ನ ಸಂಗ ಈಗ 
ಎಷ್ಟು  ದಿನವೋ ತಿಳಿದಿಲ್ಲ ಈ ರೀತಿಯ ಜೀವನ.
ಸಾಕ್ಕೆನ್ನಿಸಿ ಜೀವಕ್ಕೆ ಪೂರ್ಣ ವಿರಾಮ ಇಡಬೇಕನ್ನಿಸಿದೆ.

ಕನಸಿನಲ್ಲಿ ಬಂದು ಕಾಡುವ ನನ್ನ ನಲ್ಲನಿಗಾಗಿ

ಒಂದಿಡೀಯಾ ರಾತ್ರಿ
ಕನಸಲ್ಲಿ ಬಂದು ಅಪ್ಪಿ
ಎತ್ತಿ ಮುದ್ದಾಡಿದ ನೀನು
ನಿನ್ನೆದುರು ಇಡಿಯಾಗಿ
ಬೊಗಸೆ ತುಂಬು ನಿರೀಕ್ಷೆ
ತುಂಬಿ ನಾ ಬಂದು ನಿಂತಾಗ
ಮತೊಂದನ್ನೂ ಆಡದೆ
ಮೌನವಾಗಿ ಗಮನಿಸದೆಯೆ
ಮುಂದಡಿ ಇಡುತ್ತೀ
ನನ್ನ ಕನಸುಗಳ ಒದ್ದು
ಹೃದಯವ ಹಿಪ್ಪೆಯಾಗಿಸಿ.

ನನ್ನ ಕಣ್ಣ ತುಂಬಿದ
ಒಂದೊಂದೆ ನೀರ ಹನಿ 
ಕೆನ್ನೆ ಮೇಲೆ ಸರಿದು
ನೆಲ ಸೇರುವಾಗ
ಆ ಹನಿ ತುಂಬಾ 
ನಿನ್ನಡೆಗಿನ ಪ್ರೀತಿಯ
ಕಾವೆ ತುಂಬಿರುವದರ
ಅನುಭೂತಿ ನಾನಷ್ಟೆ ಪಡೆಯುವೆ.

ನಾ ಪಡೆದುದೇ ಇಷ್ಟೂ
ನಿನ್ನ ಪ್ರೀತಿಯ ಕನವರಿಕೆ
ನಿನ್ನ ಅಪ್ಪುಗೆಯ ಆಪ್ತತೆ
ನಿನ್ನ ಹೊಕ್ಕು ನಿನ್ನ ಹೃದಯದಿ
ಗೂಡು ಕಟ್ಟಿಕೊಳ್ಳುವ ನನ್ನದೆ
ಇರುಳ ಕತ್ತಲಿನ ಕನಸುಗಳನ್ನೂ,
ಕನಸೆಂದೂ ಅರಿವಾದಾಗ
ಮತ್ತದೆ ಕಣ್ಣ ನೀರು, ಅದೆ ಕಾವೂ
ಜೊತೆಗೊಂದಿಷ್ಟೂ ಸೂರರಿಯದ ನೋವು.

ಅದರೂ ನೀ ನನ್ನ ಕನಸಿನ ರಾಜ
ನಿನ್ನಯ ಬಿಟ್ಟು ಇತರರಿಗೆ
ಅಲ್ಲೂ ಒಂದಿಷ್ಟೂ ಹಿಡಿಯ ತಾವಿಲ್ಲ
ಅಷ್ಟರಲ್ಲೆ ನಾ ಖುಷಿ
ನೋವನ್ನು ಸ್ವೀಕರಿಸಲೂ
ಕಲಿತ ನಾನೂ ಕೂಡ ಇಂದು ಸುಖಿ.