ಶುಕ್ರವಾರ, ಆಗಸ್ಟ್ 31, 2012

ಕಾಯುವಿಕೆ
ಅಹೋ ರಾತ್ರಿ ಕನಸಿನಲ್ಲಿ ಮುತ್ತಿನ ಮಳೆ ಸುರಿಸುವ ನೀನು 
ಬೆಳಗಾಗುತ್ತಿದ ಹಾಗೆ ಎಲ್ಲಿ ಮಾಯವಾಗುತ್ತಿಯ
ಮತ್ತದೇ ಮುತ್ತಿಗಾಗಿ ಕಾದು ಕಾದು ಸೋಲುತ್ತಿರುವೆ
ಕಾಯುವಿಕೆಗೆ ಅರ್ಥವೇ ಇಲ್ಲ .

ಸೋಮವಾರ, ಆಗಸ್ಟ್ 27, 2012

ನನ್ನವನ ಎದಿರು ನೋಡುತ್ತಾ


ನನ್ನದೇ ಕೋಣೆಯಲ್ಲಿ ನಾನು 
ನನ್ನ ಮನಸಿನಲ್ಲಿ ನನ್ನವ 
ಬೇರೆ ಮಾಡಲಾಗದ ಹಾಗೆ ಕುಳಿತಿದ್ದಾನೆ 
ಅವನಿಲ್ಲಿ ಬರುವುದೊಂದೇ ಬಾಕಿ 
ತಡವಾದರೂ ಬಂದೆ ಬರುತ್ತಾನೆಂದು ತಿಳಿದಿದೆ 
ಅವನು ಬಂದಾಗ ಅವನ ತೋಳ ತೆಕ್ಕೆಯಲ್ಲಿ 
ನನ್ನನ್ನು ನಾನೇ ಮರೆತು ಬಿಡುವೆ ಅದಷ್ಟೇ ಸಾಕು ನನ್ನ ಜೀವಕ್ಕೆ

ಮುನಿಸುನನ್ನದೇ ಕೊಠಡಿಯಲ್ಲಿ ನಾ ಏಕಾಂಗಿ 
ಸಾಥ್ ನೀಡುವುದು ಗಣಕಯಂತ್ರ
ಆದರು ಮತ್ತೇನನ್ನೋ ಬಯಸುತ್ತಿದೆ ಮನಸು 
ಸ್ನೇಹಿತರಿಲ್ಲದ ಜೀವನವಲ್ಲ
ಎಲ್ಲ ಸ್ನೇಹಿತರು ಒಂದೇ ಬಾರಿ ನನ್ನ ಮೇಲೆ ಮುನಿಸಿಕೊಂಡ ಹಾಗಿದೆ 

ಶುಕ್ರವಾರ, ಆಗಸ್ಟ್ 24, 2012

ಸ್ನೇಹಿತ


ನೀನು ಹೆಸರಿಗೆ ಮಾತ್ರ ಸ್ನೇಹಿತ 
ನನ್ನ ತಂದೆ ಸ್ಥಾನದಲ್ಲಿ ನಿಂತು ಬುದ್ದಿ ಹೇಳುತ್ತಿಯ
ತಾಯಿಯಾಗಿ ಸರಿ - ತಪ್ಪುಗಳನ್ನು ತಿಳಿಸುತ್ತಿಯ
ತಮ್ಮನಾಗಿ ಅ ನಿನ್ನ ಚೇಷ್ಟೆಗೆ ಮಿತಿ ಎಲ್ಲಿ 
ಗೆಳೆಯನಾಗಿ ನನ್ನ ಜೋತೆಗಿರುತ್ತಿಯ 
ನಿನ್ನ ಪ್ರತಿಯೊಂದು ಮಾತು ನನ್ನಲಿ ಹೊಸತನವನ್ನು ಮೂಡಿಸುತ್ತದೆ 
ಈ ನಿನ್ನ ಪ್ರತಿಯೊಂದು ಪಾತ್ರಕ್ಕೂ ನಾ ಏನೇ ನೀಡಿದರು ಸರಿ ಹೊಂದಲಾರದು ಕಣೋ.


ಶುಕ್ರವಾರ, ಆಗಸ್ಟ್ 17, 2012

ಪಂಜರನನ್ನ ಜೀವನ 
ಪಂಜರದಲ್ಲಿ ಸಿಕ್ಕಿಹಾಕಿಕೊಂಡ ಪಕ್ಷಿಯಂತೆ 
ಅಕ್ವೇರಿಯಂನಲ್ಲಿ ಸಿಕ್ಕಿಹಾಕಿಕೊಂಡ ಮೀನಿನಂತೆ 
ಜೈಲಿನಲ್ಲಿ ಸಿಕ್ಕ ಕೈದಿಯಂತೆ
ಹೊರ ಪ್ರಪಂಚ ನೋಡಲಾಗುತ್ತಿಲ್ಲ 
ಸದ್ಯಕ್ಕೆ ನನ್ನ ಮನೆಯಲ್ಲಿ ನಾ ಬಂದಿತಳಾಗಿದ್ದೇನೆ
ನಾನು ಈ ಸಂಕೋಲೆಗಳಿಂದ ಹೊರಬರಬೇಕಾಗಿದೆ 
ಎಷ್ಟೇ ರಾಣಿವಾಸವಾದರೂ ರುಚಿಸುತ್ತಿಲ್ಲ 
ಈ ಬಂದನದಲ್ಲಿ ಜೀವಂತಿಕೆಯ ಕಳೆದುಕೊಳ್ಳುತಿದ್ದೇನೆ.


ಬುಧವಾರ, ಆಗಸ್ಟ್ 15, 2012

ಸ್ಪರ್ಶ


ಸಮುದ್ರದ ಅಲೆಗಳಂತೆ ನೀ ಎಷ್ಟು ಸಾರಿ ದೂರ ತಳ್ಳಿದರು 
ನಿನ್ನ ಸ್ಪರ್ಶದಿಂದ ನನ್ನ ಪ್ರೀತಿ ಜೀವಂತಿಕೆ ತಾಳುತಿದೆ .


ಪ್ರೀತಿ ಮೂಡಿದೆ


ಸಮುದ್ರದ ಮಧ್ಯ ಕಲ್ಲಿನಂತಿದ್ದೆ ನಾ
ಅದೆಷ್ಟು ಪ್ರೀತಿಯ ಅಲೆಗಳು ಅಪ್ಪಳಿಸಿದರು ಕರಗದೇ
ಇಂದೆನಾಯಿತೋ ನಾ ಅರಿಯೆ ನಿನ್ನ ಪ್ರೀತಿಯೆಂಬ ಅಲೆ ಅಪ್ಪಳಿಸಿದಕ್ಕೆ 
ಕಲ್ಲು ಕೂಡ ಹೂ ಆಗಿದೆ 
ಆ ಹೂವಲ್ಲಿ ಪ್ರೀತಿಯ ಕನಸು ಮೂಡಿದೆ ಗೆಳೆಯ 

ಭಾನುವಾರ, ಆಗಸ್ಟ್ 12, 2012

ಪ್ರೀತಿ ಮರೆತವ

ಪ್ರೀಯ ನೀ ಮಾಡಿದ್ದೂ ನಿನಗೆ ಸರಿ ಎನಿಸಬಹುದು 
ಅವಳು ನನಗಿಂತಲೂ ಸುಂದರವಾಗಿರಬಹುದು
ಬಹುಶಃ ನನಗಿಂತ ಹೆಚ್ಚು ಪ್ರೀತಿ ಅವಳು ನೀಡಿರಬಹುದು 
ಆದರೆ ನಾನು ಮಾಡಿದ ದ್ರೋಹವಾದರೂ ಏನು ನಿನಗೆ........ ???
ನನ್ನ ಪ್ರೀತಿಯಲ್ಲಿ ಏನಾದರು ದೋಷವಾ .......... ???
ನಿನ್ನ ಪ್ರೀತಿಯ ನಿರೀಕ್ಷಿಸಿದ್ದು ತಪ್ಪಾ..... ???
ನನಗೆ ತಿಳಿಸದೇ ನೀ ಹೀಗೆ ಮಾಡಿದ್ದೂ ತಪ್ಪಲವೇ ಇನಿಯ .........???

ಶನಿವಾರ, ಆಗಸ್ಟ್ 11, 2012

ಗುರುವಾರ, ಆಗಸ್ಟ್ 9, 2012

ಕಲ್ಪನೆ


ಕಲ್ಪನೆ ಕೇವಲ ಕವಿಗೆ ಮಾತ್ರ ಸೀಮಿತವಲ್ಲ

ಪ್ರೇಮಿಯು ಕಲ್ಪಿಸಬಲ್ಲ ತನ್ನ ಪ್ರಿಯತಮೇಯ ಬಗ್ಗೆ.

ನಿರೀಕ್ಷಣೆ

ಗೆಳೆಯ ಕಾಯುತಿರುವೆ ನಿನಗಾಗಿ , ನಿನ್ನ ಪ್ರೀತಿಗಾಗಿ
ನಾ ಸಾಯುವವರೆಗೂ ನಿನ್ನ ಬರುವಿಕೆಯ ಎದುರು ನೋಡುತ್ತಾ
ಒಂದಲ್ಲ ಒಂದು ದಿನ ಬಂದು ಸೇರುವೆ
ಈ ನಿನ್ನ ಪ್ರೀತಿ ನಿರೀಕ್ಷಿಸುತ್ತಿರುವ ಕಣ್ಣುಗಳ.

ಆಸೆಜೋಡಿ ಬೆರಳಗುವ ಆಸೆ 


ನಿನ್ನ ಬಿಟ್ಟು ಹೋಗಲಾರದ ಹಾಗೆ


ಕಣ್ಣಿಗೆ ರೆಪ್ಪೆ ಆಗುವ ಆಸೆ 


ನಾ ನಿನ್ನ ಪಾಪೆಯ ರಕ್ಷಿಸುವ ಹಾಗೆ


ನಿನ್ನ ಉಸಿರಾಗುವ ಆಸೆ 


ಶಾಶ್ವತವಾಗಿ ನಿನ್ನ ಜೊತೆ ಇರುವ ಹಾಗೆ .

ಚಂದ್ರನ ಕನಸು

                                          

ನಿನ್ನ ಬಯಸಿದ್ದು ತಪ್ಪಾಯಿತು
ತಿಳಿದು ತಿಳಿದು
ಚಂದ್ರನಿಗೆ ಏಣಿ ಹಾಕಿದಂಗಾಯಿತು
ನಕ್ಷತ್ರಗಳ ಎಣಿಸಲು ಪ್ರಯತ್ನಿಸಿದಂತಾಯಿತು
ಈ ಸತ್ಯ ತಿಳಿದರೂ ಮನವೇಕೊ
ಬಯಸುತಲೇ ಇದೆ ನಿನ್ನನು...!?!
-ಶೈಲೂ

ಭಾನುವಾರ, ಆಗಸ್ಟ್ 5, 2012

ಪ್ರೇಮ ಕಥೆ
ನನ್ನೀ ಸಂಕುಚಿತ ಮನಸ್ಸಿಗೆ 

ನಿನ್ನಿ ವಿಶಾಲ ಹೃದಯಕ್ಕೆ ಎಲ್ಲಿಂದೆಲ್ಲಿಯ ಸಂಬಂದ 

ಆದರು ಬೆಸೆದಿದ್ದಾನೆ ಆ ದೇವರು ನೂರಾರು ಮೈಲಿಗಳ 

ಅಂತರದಲ್ಲಿ ಹೀಗೊಂದು ಪ್ರೇಮ ಕಥೆಯನ್ನು 

-ಶೈಲೂ