ಶನಿವಾರ, ಸೆಪ್ಟೆಂಬರ್ 29, 2012

ಸವಿದ ಪ್ರೀತಿ
ಸವಿದ ಪ್ರೀತಿ
ಈ-ಕ್ಷಣಕ್ಕೂ ಮಧುರಾನುಭವ
ಶಾಶ್ವತಗೊಳ್ಳಲಿ ಬಿಡು
ನೀ-ಜತೆಗಿರೆ ಸಾಕು
ಜೀವನ ಪೂರ್ತಿ 
ಸವಿದ ಮಧುರಾನುಭವವ
ನೆಲೆಗೊಳಿಸಿಕೊಳ್ಳುವೆ
ನಲ್ಲೆಯಾಗಿ


ಮಂಗಳವಾರ, ಸೆಪ್ಟೆಂಬರ್ 25, 2012

ಹೊಸ ಪರಿಚಯಹೊಸ ಪರಿಚಯಗಳು ಬಹಳ 

ಬದಲಾವಣೆ ತರುತ್ತದೆನ್ನುತ್ತಾರೆ ..!

ಹಾಗೆಯೇ ನೀ-ಬಂದು 

ನನ್ನ ಜೀವನದಲ್ಲೂ

ಸಾಕಷ್ಟು ಬದಲಾಗಿದೆ..!

ನನ್ನ ಜೀವನ ಈಗ 

ದೇವರ ಪಾದದಡಿ ಹೂವಿನ ಹಾಗೆ 

ಸುಖಾವಾಗಿದೆ ...!

ಸಾದಾ ಅದನ್ನೇ ಬಯಸುತ್ತಿದೆ ನನ್ನ ಮನ

ಚಿನ್ನು ಇರುತ್ತಿಯಲ್ಲ ಸದಾಕಾಲ ನನ್ನೊಡನೆ ನೀನು ?


ಶನಿವಾರ, ಸೆಪ್ಟೆಂಬರ್ 22, 2012

ಸ್ವರ್ಗ
ಪ್ರೀತಿಗೆ ಸ್ಥಳವಿಲ್ಲದ ನನ್ನಲಿ 
ನೀ ಪ್ರೀತಿಸುವ ಹಾಗೆ ಮಾಡಿದೆ 
ನಿನ್ನ ಪ್ರೀತಿ ಮೊದಲನೆಯದ್ದು
ಏನೋ ಒಂದು ಪುಳಕ ನನ್ನಲ್ಲಿ 
ನೀ ಹಾಗೆ ಇದ್ದು ಬಿಡು ನನ್ನೊಡನೆ 
ನೀ ನನ್ನ ಜೊತೆ ಇರುವೆ..ನಂಬಿದ್ದೇನೆ
ಕಣ್ಣಿನ ರೆಪ್ಪೆ ಹಾಗೆ ಕಾಪಾಡುತ್ತದೆಯೋ
ನಿನ್ನನು ನನ್ನ ಎದೆಯ ಗೂಡಲ್ಲಿಟ್ಟು ಬಚ್ಚಿಕೊಳ್ಳುತ್ತೇನೆ 
ಸದಾ ನಿನ್ನ ಪ್ರೀತಿ ನನ್ನೋಡನಿದ್ದರೆ ...
ಅದೇ ನನಗೆ ಸ್ವರ್ಗ ಕಣೋ ..... !!! 

ಗುರುವಾರ, ಸೆಪ್ಟೆಂಬರ್ 13, 2012

!....ಅಮ್ಮಾ...!

‎ನಿನ್ನ ಪ್ರೀತಿಯೆದುರು
ಮಿಕ್ಕಿದೆಲ್ಲವೂ ನಗಣ್ಯ
ಜನ್ಮ ಕೊಟ್ಟೆ..ರೂಪ ಕೊಟ್ಟೆ
ಹೆಸರಿಟ್ಟೆ ಬದುಕ ಬಿಟ್ಟೆ
ನಿನ್ನ ತ್ಯಾಗ...ಮಮಕಾರ
ಕಾಳಜಿ ..ವಾತ್ಸಲ್ಯಕ್ಕೆ
ನಾ- ಚಿರಋಣಿ ....
ಅಮ್ಮಾ...ನೀನೆ ಎಲ್ಲ
ಸರ್ವಸ್ವ...ಶಕ್ತಿ
ನೀನೊಬ್ಬಳಿದ್ದರೆ
ನನಗದೆ ಜಗತ್ತು
ನೀನೆ ನನಗೆಲ್ಲ...!
-ಶೈಲೂ

ಮಂಗಳವಾರ, ಸೆಪ್ಟೆಂಬರ್ 11, 2012

ನಂಬಿಕೆ ದ್ರೋಹ


ಕೆಲವೊಮ್ಮೆ ದುಃಖವು ಸಿಹಿಯಾಗಿರುತ್ತದೆ 
ಮನುಸ್ಯನಿಗೆ ದುಃಖ ಪಾಠ ಕಲಿಸುತ್ತದೆ 
ನಂಬಿಕೆ ದ್ರೋಹವಾದ ಮೇಲೆ 
ಮತ್ತದೇ ದುಃಖ ಮರೆಯಲಾಗದು
ಯಾರನ್ನು ನಂಬಲಾಗದು
ಹೌದು....
ನಂಬಿಕೆಗೆ ದ್ರೋಹ ಬಗೆಯುವುದು ಸರಿಯಾ.....?!?
-ಶೈಲೂ

ಭಾನುವಾರ, ಸೆಪ್ಟೆಂಬರ್ 9, 2012

ಮೊದಲ ಪ್ರೇಮಮೊದಲ ಪ್ರೇಮ

ನಿಷ್ಕಲ್ಮಶವಾಗಿ ಪ್ರೀತಿಸಿದೆ 

ಆದರೆ-ನಿನ್ನೀ ಪ್ರೀತಿಯಲಿ ಮೋಸವಿತ್ತು

ನೀ ಪ್ರೀತಿಸುತ್ತಿರುವೆ ಎನ್ನುವುದೇ ಸುಳ್ಳಾಗಿತ್ತು

ತಡೆಯಲಾಗದಷ್ಟು ನೋವು ಕೊಟ್ಟೆ 

ಎಣಿಸಲಾಗಲಿಲ್ಲ ಆ ನೋವ ಪರಿಣಾಮವ 

ಕಣ್ಣಾಲೆಗಳು ತನಗರಿಯದ ನೆಲ ತಾಕುತ್ತಿವೆ 

ಯಾವುದನ್ನು ತಡೆಯಲು ನನಿಂದ ಸಾದ್ಯವಿಲ್ಲ 

ಸಾಕಾಗಿದೆ ಕಣೋ ಪ್ರೀತಿಯ ನಾಟಕದ

ಬಲೆಯಲ್ಲಿ ಬಿದ್ದು ಒದ್ದಾಡಿದ್ದು-

ಯಾವ ತರಹದ ನೋವ ಸಹಿಸಲಾರೆ

ಮೌನಕ್ಕೆ ಶರಣಾಗಿ ಪ್ರೀತಿ ಮರೆಯಲೆತ್ನಿಸುತ್ತೇನೆ..!!

-ಶೈಲೂ

ಶುಕ್ರವಾರ, ಸೆಪ್ಟೆಂಬರ್ 7, 2012

ಹೂವು
ಹೂವಿನ ಜೀವನವೇ ಲೇಸು 
ದಿನದ ಮಟ್ಟಿಗೆ ಇದ್ದರು ಹೂವಿಗೆ ಬೆಲೆ
ದೇವರ ಪಾದದಲ್ಲಿ ಎರಗಿಯೋ..
ಹೆಣ್ಣಿನ ಮುಡಿಯಲ್ಲಿ ಮುದುಡಿಯೋ...
ಅರಳಿದಲ್ಲೇ ಬಾಗಿ ಬಾಡಿಬಿಡುತ್ತದೆ

ಮನುಜ ಜೀವನವೇಕೆ ಹಿಂಗಿಲ್ಲ...???
ಸಾಕಷ್ಟು ನೋವು - ನಲಿವುಗಳನ್ನು ಹೊತ್ತು 
ಜೀವನ ಸಾಗಿಸುವುದಕ್ಕೆ ಸಾಕಾಗಿ ಬಿಡುತ್ತದಲ್ಲ..????
-ಶೈಲೂ ಗುರುವಾರ, ಸೆಪ್ಟೆಂಬರ್ 6, 2012

ಮನದ ಕೀಲಿ ಕೈ

ಆತನ ಮನದ ಕೀಲಿ ಕೈ ನಾನೆಂದೂ ತಿಳಿದಿದ್ದೆ
ಭ್ರಮೆ ಇದೆಂದೂ ಅರಿತಾಗ ಕೀಲಿ ಎಲ್ಲಿ ಕಳೆದೆನೊ ತಿಳಿಯೆ.
ಆದರೂ ಆತನ ಮನದ ಬಾಗಿಲ ತೆರೆಯುವ ಕೀಲಿ 
ನಾನಾಗುವೆನೆಂಬ ಆಸೆ.....
ಅದಕ್ಕಾಗೆ ಈ ಮನಸು ನನ್ನಾತನಿಗಾಗಿ ಹಾತೊರೆದಿದೆ
ಬರಮಾಡಿಕೊಳ್ಳುವ ಅವನ ಮನದಂಗಳಕ್ಕೆಂಬ
ಹುಸಿ ಕನಸು ಸಿರೀಕ್ಷೆಯಲ್ಲಿ.
ನಿರೀಕ್ಷೆಯೂ ಜೀವಂತಿಕೆಯ ತುಂಬಿದೆ
ನನ್ನ ಮನದ ತುಂಬಾ ಅವನ ಸಹಿ ನೆನಪಿನೊಂದಿಗೆ.
- ಶೈಲೂ 


ಬುಧವಾರ, ಸೆಪ್ಟೆಂಬರ್ 5, 2012

ಬಿಂಕ
ನಿನ್ನೆಯ ಕನಸು 
ನನ್ನವ ಕನಸಿನಲ್ಲಿ ಬಂದಿದ್ದ
ಅವನನ್ನು ನಾನು ಇದುವರೆಗೂ ನೋಡಿಲ್ಲ 
ಆದರು ಅವನೇ ಎಂದು ಮನ ಗುರುತಿಸಿತ್ತು . 
ನನ್ನ ಕೆಲಸದ ಸ್ಥಳಕ್ಕೆ ಬಂದಿದ್ದ 

ಅವನ ಮೇಲೆ ಹುಸಿ ಮುನಿಸು ಜೊತೆಗೆ ಕೆಲಸದ ಒತ್ತಡ . 
ಅವನನ್ನು ಕಂಡು ಕಾಣದ ಹಾಗೆ ಇದ್ದೆ
ಮಾತನಾಡಿಸಲು ಮನಸಿಲ್ಲ 
ಅವನಿಗೆ ಮಾತ್ರ ಗೋತ್ತಾ ಬಿಂಕದಿಂದ ಇರುವುದು.............?

ಕಹಿ ನೆನಪು

ಮರೆತ ನೆನಪುಗಳೇಕೆ 
ಮಗ್ಗುಲು ಬದಲಿಸಿ ಕಣ್ಣ್ಣಮುಂದೆ ನಿಲ್ಲುತವೆ ...?
ಕಹಿ ನೆನಪುಗಳ್ಯಾಕೆ ಮರಳಿ ಬರುತ್ತವೆ...?
ನೆನಪಾಗಬೇಕಾದ ಕನಸುಗಳ್ಯಾಕೆ ಮರೆಯಾಗುತ್ತವೆ...? 
ಬೇಡದ ನೆನಪುಗಳು ಮನದಾಳ ತಾಕುವಂತೆ
ಬೇಕಾದ ನೆನಪುಗಳ್ಯಾಕೆ ತಾಕುವುದಿಲ್ಲ ತಾಕಬೇಕಾದವರಿಗೆ...?
-ಶೈಲೂ

ಮಂಗಳವಾರ, ಸೆಪ್ಟೆಂಬರ್ 4, 2012

ಅಲೆ
ನಿನ್ನ ಪ್ರೀತಿ ನೀರಿನ ಹಾಗೆ 
ಬೊಗಸೆಯಲ್ಲಿ ಮೊಗೆದಷ್ಟು ಸಿಗುತ್ತದೆ 
ಆದರು ಅದೆನಗೆ ಸಾಕಾಗುತ್ತಿಲ್ಲ 
ಗೆಳೆಯ ನೀನು ನಿನ್ನ ಪ್ರೀತಿಯನ್ನು 
ಸಮುದ್ರದ ಅಲೆಯಂತೆ ತಂದು ನನ್ನ ಮುಂದಿಡು
ಆ ಅಲೆಯ ಕೂಡಿ ನಾನು -
ನಿನ್ನ ಪ್ರೀತಿಯೆಂಬ ಸಮುದ್ರವ ಸೇರಿದರೆ
ನನಗೆ ನಿನ್ನ ಪ್ರೀತಿ ಸಾಕೇನಿಸಬಹುದೇನೂ......?
-ಶೈಲೂ