ಗುರುವಾರ, ಸೆಪ್ಟೆಂಬರ್ 6, 2012

ಮನದ ಕೀಲಿ ಕೈ

ಆತನ ಮನದ ಕೀಲಿ ಕೈ ನಾನೆಂದೂ ತಿಳಿದಿದ್ದೆ
ಭ್ರಮೆ ಇದೆಂದೂ ಅರಿತಾಗ ಕೀಲಿ ಎಲ್ಲಿ ಕಳೆದೆನೊ ತಿಳಿಯೆ.
ಆದರೂ ಆತನ ಮನದ ಬಾಗಿಲ ತೆರೆಯುವ ಕೀಲಿ 
ನಾನಾಗುವೆನೆಂಬ ಆಸೆ.....
ಅದಕ್ಕಾಗೆ ಈ ಮನಸು ನನ್ನಾತನಿಗಾಗಿ ಹಾತೊರೆದಿದೆ
ಬರಮಾಡಿಕೊಳ್ಳುವ ಅವನ ಮನದಂಗಳಕ್ಕೆಂಬ
ಹುಸಿ ಕನಸು ಸಿರೀಕ್ಷೆಯಲ್ಲಿ.
ನಿರೀಕ್ಷೆಯೂ ಜೀವಂತಿಕೆಯ ತುಂಬಿದೆ
ನನ್ನ ಮನದ ತುಂಬಾ ಅವನ ಸಹಿ ನೆನಪಿನೊಂದಿಗೆ.
- ಶೈಲೂ 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ