ಶುಕ್ರವಾರ, ಅಕ್ಟೋಬರ್ 19, 2012

ಮುಸ್ಸಂಜೆ
ನಾ ಒಂಟಿ 
ನೀನಿಲ್ಲದ ಆ ಮುಸ್ಸಂಜೆ 
ನಿನ್ನ ವಿನಹ 
ಪಯಣ ಸಾಗುತ್ತಿಲ್ಲ 
ಬರಬಾರದೆ ನನ್ನೊಡನೆ 
ನಿ ಮತ್ತೊಮ್ಮೆ 
ಕಾಯುತ್ತಿರುವೆ ನಿನಗಾಗಿ 
ಈ ಸಂಜೆಯಲ್ಲಿ 

ಬುಧವಾರ, ಅಕ್ಟೋಬರ್ 17, 2012

ಶುಕ್ರವಾರ, ಅಕ್ಟೋಬರ್ 12, 2012

ವರ
ನನ್ನ ಬಾಳಲಿ ನೀ-ಬಂದೆ
ವರವೆಂದು ನಾ- ಭಾವಿಸಿದೆ
ಅದು ಅಕ್ಷರಶ ಸುಳ್ಳಾಗಿತ್ತು 
ನೀ- ನೀಡಿದ ನೋವು 
ಮನಸ ಕನ್ನಡಿಯೊಳಗೆ
ಬೇರು ಬಿಟ್ಟು ಕಾಡುತ್ತಿದೆ..!

ಮಂಗಳವಾರ, ಅಕ್ಟೋಬರ್ 9, 2012

ನಗರ
ನಗರ ಬಿಟ್ಟು ಹೋಗಲು ಬಯಸಿದ್ದೆ 
ನನ್ನದೇ ದಾರಿ ಹಿಡಿದು ನಡೆದಿದ್ದೆ ದಾರಿಯ ಅಂಚು 
ಅಂಚಿನಲ್ಲಿ ಆ ಕಡೆ ಸಮುದ್ರ ದಾರಿಯೇ ಕಾಣದಾಗಿದೆ 
ಮತ್ತೆ ಹಿಂದೆ ಬರಲು ಮನಸ್ಸಾಗುತ್ತಿಲ್ಲ 
ಹಿಂತಿರುಗಿ ನೋಡಿದೆ ಮತ್ತದೇ ನಗರ 
ನನ್ನನು ಕೈ ಬಿಸಿ ಕರೆದಂತಾಯಿತು.........

ಕಹಿ ಸತ್ಯ

ನನ್ನಿಷ್ಟಗಳಿಗಾಗಿ
ನೀನು ಸುಳ್ಳಾದರೂ ಹೇಳಿ 
ನನ್ನ ಮನಸಂತೋಷಗೊಳಿಸು.
ಆದರೆ, ಕಹಿ ಸತ್ಯ ಹೇಳಿ 
ನನ್ನೀ ಮನಸ್ಸನ್ನು ನೋಯಿಸಬೇಡ 
ಅದು ಈಗಾಗಲೇ ತುಂಬಾ ನೊಂದು
ನೋವಿನ ಮಡಿಲಲ್ಲಿ ನರೆಳುತ್ತಿದೆ..!