ಮಂಗಳವಾರ, ಮೇ 7, 2013

ಭಾವನೆ

ನಿನಗನ್ನಿಸಬಹುದು
ನೀ ನನಗೆ ಕೇವಲ ಸ್ನೇಹಿತನೆಂದು
ಅದು ನಿನ್ನ ಮನಸಿನ ಭಾವನೆ 
ನೀ ಆ ಸ್ನೇಹಿತನಿಗಿಂತ ಹೆಚ್ಚೆಂದು
ನಾ ಹೇಗೆ ಹೇಳಲಿ ನನಗೆ ತಿಳಿದಿಲ್ಲ
ನಿನ್ನನ್ನು  ಮನಸಿನಲ್ಲಿಟ್ಟಿದ್ದೆ
ಕೇವಲ ಸ್ನೇಹಿತನಾಗಲ್ಲ
ಪ್ರಾಣ ಸ್ನೇಹಿತನಾಗಿ
ಇದಕ್ಕೂ ಮಿಗಿಲಾಗಿ ಹೇಳಲು
ನನ್ನಲ್ಲಿ ಪದಗಳು ಇಲ್ಲ ................ 

ಮಂಗಳವಾರ, ಮಾರ್ಚ್ 12, 2013

ಜೊತೆಯಾಗಿ ಬಾಳೋಣ

ಮನಸೇಕೋ ನಿನನ್ನೇ ನೆನೆಸುತ್ತಿದೆ
ನಾವಾಡಿದ ಮಾತು ನನನ್ನು ಅಣಕಿಸುತ್ತಿದೆ
ನಾವು ಓಡಾಡಿದ ಜಾಗ ನೀನು ನನ್ನೋಡನಿಲ್ಲವೆಂದು ತಿಳಿಸುತ್ತಿವೆ
ಬಂದು ಬಿಡು ಗೆಳಯ/ತಿ ನನ್ನೊಡನೆ
ಮತ್ತೆ ನಾನು ನೀನು ಜೊತೆಯಾಗಿ ಬಾಳೋಣ

ಶುಕ್ರವಾರ, ಫೆಬ್ರವರಿ 1, 2013

ಹರಸಿ


ನನ್ನವನ ಅರಸಿ ನಾ ಹಿಂದಿರುಗಿ ಹೋಗಿದ್ದೆ 
ನಾ ಹೋದದ್ದು ತಡವಾಯಿತು
ಅವನಾಗಲೆ ಹಸಮಣೆಯಲ್ಲಿದ್ದ 
ತನ್ನನರಸಿ ಬಂದ ಹುಡುಗಿಯೊಡನೆಗುರುವಾರ, ಜನವರಿ 24, 2013

ಹೋರೆನಿನ್ನೀ ಸ್ನೇಹ 
ನನ್ನನ್ನು ಪುನರ್ ಜನ್ಮಿಸುವಂತೆ ಮಾಡಿತು 
ನೀ ಸಂತೈಸಿದ ರೀತಿ ನನ್ನ ಮನದಾಳದ ದುಃಖವನ್ನು ನೀಗಿತ್ತು.......
ಅದರೆ ಸಣ್ಣದೊಂದು ನೋವು ನನ್ನಲ್ಲಿ 
ನಾನೆಲ್ಲಿ ನಿನ್ನ ಮೇಲೆ 
ಹೋರೆಯಾಗುತ್ತಿದ್ದೆನೆಯೇ 
ಅನಿಸುತ್ತದೆ

ಬುಧವಾರ, ಜನವರಿ 23, 2013

ಮನದ ಗುಡಿ
ನನ್ನೀ ಮನದಲ್ಲಿ ಗುಡಿಯ ಮಾಡಿ 
ನಿನ್ನನ್ನು ಅಲ್ಲಿ ಮೂರ್ತಿಯಗಿಸಿ 
ಪೂಜಿಸಲೇ ನಾ ನಿನ್ನ ನನ್ನ ದೇವರೆಂದು ?? 
ಅದರಾವಶ್ಯಕತೆ ಇಲ್ಲವೇನಿಸುತ್ತದೆ 
ನೀ ಅಗಲೇ ಮೂರ್ತಿಯಗಿದ್ದಿಯಾ 
ನನ್ನಿ ಪುಟ್ಟ ಮನದ ಗುಡಿಯ ಬಿಟ್ಟು 
ಹೊರ ಹೋಗುವ ಮನಸ್ಸು ಮಾಡದಿರು ಗೆಳತಿ

ಶುಕ್ರವಾರ, ಜನವರಿ 18, 2013

ಕನಸು-ನನಸು


ನಿನ್ನ ಪ್ರೀತಿಯಲ್ಲಿ 
ಅದೇಷ್ಟೊ ಕನಸ ಕಂಡಿದ್ದೆ 
ಕನಸು ನನಸಾಗುವ ಮುನ್ನವೇ 
ನನ್ನೆಲ್ಲಾ ಕನಸು ಒದ್ದು 
ನೀನು ಬೇರೆಯವರ ಕೈ ಹಿಡಿಯಲು 
ಹೋರಟಿರುವೆಯಲ್ಲಾ 
ನಿನಗಿದು ಸರಿಯೇ 
ಗೆಳತಿ…?