ಸೋಮವಾರ, ಏಪ್ರಿಲ್ 14, 2014

ಪ್ರೀತಿಯಲಿ ನೊಂದ ಮನ

ಸಾಕು ಮಾಡು ಇನಿಯ

ನಿನ್ನ ಈ ಹುಸಿ ಪ್ರೀತಿಯ
ಮನವು ಬೆಂದು ನೊಂದಿದೆ
ನೀನಾಡಿದ ಅಪನಂಬಿಕೆಯ ಮಾತಿಗೆ
ಸುಳ್ಳೇ ಆ ಎಲ್ಲಾ ಒಲವಿನ ಮಾತು
ಕೇವಲ ನಟನೆಯೇ ನೀ ಕೊಟ್ಟ ಮುತ್ತು?

ಜಾರಿದ ಕಣ್ಣ ಹನಿ

ನಿನ್ನ ನೆನಪಿನಲ್ಲಿ 

ಜಾರಿದ ಅದೆಷ್ಟೋ 
ಕಣ್ಣ ಹನಿಗಳು 
ನಿನಗದರ ಪರಿವೆಯೇ 
ಇಲ್ಲವೇ ಗೆಳೆಯ 
ಸಂತೋಷವಾಗಿದೆಯೆನಿಸುತಿದೆ 
ನಿನ್ನ ನೆನಪಿನಲ್ಲಿ ದಿನವೀಡಿ ಕಣ್ಣಿರಾಗುತ್ತಿದೇನೆ 
ನಾನಿಲ್ಲಿ .

ಕ್ಷಣ ಕ್ಷಣಕೂ
ಕ್ಷಣ ಕ್ಷಣಕೂ 

ನಿನ್ನ ಪ್ರೀತಿಯ

ನಿರೀಕ್ಷಿಸುತ್ತಿದ್ದೆ 

ಎಂದೂ ಆ ಪ್ರೀತಿ 

ದೊರೆಯದೆಂದು 

ತಿಳಿದಿದ್ದರೂ 

ಅದೆಷ್ಟೂ ದೂರ 

ಹೋದೆಯ ನಲ್ಲ 

ನನ್ನ ಬಿಟ್ಟು ಹೋಗಲು

ಮನಸಾದರು ಹೇಗೆ ಬಂತು 

ನಿನಗೆ.

ಹುಸಿಮುನಿಸು

ಪ್ರೀಯ ಗೆಳೆಯ 

ನನ್ನದೊಂದು ಮನವಿ 

ನಿನ್ನನ್ನು ಚುಡಾಯಿಸಲು 
ಬಹಳ ಇಷ್ಟ ನನಗೆ 
ಬೇಸರಿಸದಿರು ಗೆಳೆಯ 
ಕೇವಲ ಪ್ರೀತಿಯಿಂದಾಗಿ 
ನಿನ್ನ ಹುಸಿಮುನಿಸ ನೋಡಲು 
ಬಲು ಚಂದ ನನಗೆ.

ನನಗೆ ಪುಟ್ಟದೊಂದು ಕೋರಿಕೆ

ಗೆಳೆಯ ನೀನು ಪ್ರತಿ ಬಾರಿ 

ನನ್ನನು ಒಲವಿನಿಂದ 
ಚಿನ್ನು ಬಂಗಾರ ಎಂದಾಗಲೆಲ್ಲ 
ನನ್ನಲ್ಲಿ ಏನೋ ಹೊಸತನ 
ಮೂಡುತ್ತದೆ ನಿನ್ನ ಮಮತೆಯಲ್ಲಿ 
ನನ್ನನು ನಾನೇ ಮರೆತು ಬಿಡುತ್ತೇನೆ 
ಅದೆಷ್ಟು ಪ್ರೀತಿಯ ಮಳೆ ಸುರಿಸುತ್ತಿಯಾ 
ನನಗೆ ಊಹಿಸಲು ಸಹ ಸಾದ್ಯವಿಲ್ಲ 
ಆ ನೀನಿಲ್ಲದ ಬದುಕನ್ನು 
ನನಗೆ ಪುಟ್ಟದೊಂದು ಕೋರಿಕೆ ನೀನು 
ಸದಾ ಕಾಲ ನನ್ನೊಡನಿದ್ದು ಬಿಡೋ

ಜಾತಿ

ಜಗತ್ತಿನಲ್ಲಿ ಇರುವುದು 
ಎರಡೇ ಜಾತಿ ಜಾತಿ 
ಗಂಡು-ಹೆಣ್ಣು ಎನ್ನುತಾರೆ


ಎಲ್ಲಾ 
ಆದರು ಈ ಜನರೇಕೆ 
ಜಾತಿ- ಜಾತಿ ಎಂದು 
ಜಾತಿಯ ಮೋಹದಲ್ಲಿ ಬಿದ್ದು ಒದ್ದಾಡುತ್ತಾರೋ 
ಇರುವುದನ್ನು ಒಪ್ಪಿಕೊಂಡರೆ 
ನಾವೆಲ್ಲಾ ಒಂದೇ ಜಾತಿ 
ಮಾನವ ಜಾತಿ

ಸ್ವಾರ್ಥಿ


ನಾನೆಷ್ಟು ಸ್ವಾರ್ಥಿ

ನಿನ್ನ ಪ್ರೀತಿಯ 

ಪ್ರತಿ ಹನಿಯೂ

ನನದಾಗಬೇಕೆಂಬ ಆಸೆ

ಈ ಆಸೆ-ದುರಾಸೆಗಳ ನಡುವೆ

ನಿನ್ನನ್ನೇ ದೂರವಿಡಲು

ಮನ ಬಯಸುತಿದೆ.

ನನ್ನ ಮನನಿನ್ನ ಪ್ರೀತಿಯ ಪರಿ 

ನಾ ಅರಿತಿರಲಿಲ್ಲ ಗೆಳೆಯ 

ನಿಜ ಹೇಳಬೇಕೆಂದರೆ 

ನಿನ್ನ ಪ್ರೀತಿ ಇಂಚಿಂಚು 

ಸವಿಯುತ್ತಿದೇನೆ 

ಸದಾ ಕಾಲ ಹೀಗೆ 

ಇರಬೇಕೆಂದು ಬಯಸುತ್ತಿದೆ 

ನನ್ನ ಮನ

ಕವಿತೆನಾ 

ಬರೆದ ಕವಿತೆ 

ಪದೇ ಪದೇ 

ನನ್ನನ್ನೇ ಚುಚ್ಚಿ 


ಕೊಳ್ಳುತ್ತಿದೆ

ಗುರುವಾರ, ಏಪ್ರಿಲ್ 10, 2014

ಕಾರಣ ಹೇಳಿ ಹೋಗು

ನಿನಗೆ ಗೊತ್ತ 

ನೀ ಸ್ಪರ್ಶಿಸಿದ ವಸ್ತುವನ್ನು 
ನಾನು ತಾಕುತಿದ್ದೇನೆ 
ಅನ್ನೋ ಖುಷಿಯೂ ವಿವರಿಸಲಾಸದ್ಯ 
ನಿನನ್ನು ಅಷ್ಟು ಪ್ರೀತಿಸುತ್ತಿದ್ದೆ ಗೆಳೆಯ 
ನಿನಗಾ ಪ್ರೀತಿ ಬೆಲೆಯೇ ತಿಳಿಯದಾಯಿತು 
ನನ್ನ ಬಿಟ್ಟು ನೀ ದೂರ ಹೋಗಿದ್ದೇಕೆ ? 
ಹೋಗುವ ಮುನ್ನ ಕಾರಣ ಹೇಳಬಾರದಿತ್ತೆ 
ಸದಾ ನಿನ್ನ ನೆನಪಿನಲ್ಲೇ ನಾ ಕೊರಗುತಿದ್ದೇನೆ 
ಇಂಚು - ಇಂಚಾಗಿ ಬಿಳುತ್ತಿದೇನೆ 
ಅನ್ನೋ ಭಾವನೆ ಕಾಡುತಿದೆ ನನ್ನಲ್ಲಿ

ಅತಿಯಾದ ಪ್ರೀತಿ

ನನ್ನಿಂದ ದೂರಾಗು ಗೆಳತಿ 

ನಿನ್ನ ಅತಿಯಾದ ಪ್ರೀತಿ 
ನನಗೆ ನರಕದಂತೆ ಬಾಸವಾಗುತ್ತಿದೆ 
ಗಾದೆ ಮಾತಿನ ಹಾಗೆ 
ಅತಿಯಾದರೆ ಅಮೃತವು ವಿಷವಾಗುತ್ತದೆ 
ನಿನ್ನ ಪ್ರೀತಿ ನನಗೆ ನರಕವನ್ನೇ ತಂದೊಡ್ಡುತ್ತಿದೆ 
ಬಿಟ್ಟು ಬಿಡು ಗೆಳತಿ 
ನನ್ನಿಂದ ದೂರ ಹೋಗು ಎಂದೂ ತಿರುಗಿ ನೋಡದಿರು 
ಸಾಕಿನ್ನು ನಿನ್ನ ಪ್ರೀತಿಯನ್ನು ನಾ ಸಹಿಸಲಾಗುತ್ತಿಲ್ಲ 
ಹೋಗಿ ಬಿಡು ಗೆಳತಿ ಹಿಂತಿರುಗಿ ನೋಡದೆ

ಕಣ್ಣಿರ ಹನಿ

ಕಣ್ಣಿರ ಹನಿಯೇ !

ಇದ್ದುಬಿಡು ಕಣ್ಣಲ್ಲೇ 
ಹೊರಗೆ ಬರಬೇಡ 
ಮಾತ ಮೀರಿ ಬಂದರು 
ಸಂತೈಸುವವರಾರಿಲ್ಲ 
ಬದಲಾಗಿ ಆಡಿಕೊಂಡು 
ನಗುವವರಿದ್ದಾರೆ ಈ ಜಗದಲ್ಲಿ

ನೀನಿಲ್ಲದಾ ನಾ ಬರಿ ಶೂನ್ಯ

ನಾ ತಿಳಿದಿದ್ದೆ ನಾನೇ ರಾಜನೆಂದು 

ಯಾರಿಗೇನು ಕಡಿಮೆ ಇಲ್ಲವೆಂದು 
ಆದರೆ ಗೆಳತಿ ಅದು 
ನಿನ್ನಿದಲೇ ಅನ್ನುವುದನ್ನು ಮರೆತಿದ್ದೆ 
ಈಗೀಗ ನನಗೆ ಅರಿವಾಗುತ್ತಿದೆ 
ನನ್ನ ತಪ್ಪನ್ನು ಮನ್ನಿಸಿ 
ಒಂದು ಸಾರಿ ಹಿಂತಿರುಗಿ ಬಂದು ಬಿಡು ಕಣೆ 
ನೀನಿಲ್ಲದಾ ನಾ ಬರಿ ಶೂನ್ಯವಾಗಿದ್ದೇನೆ .....

ಗೆಳೆಯ

ಗೆಳೆಯ 

ನಿನ್ನ ತೊಳಿನಲ್ಲಿ 
ಶಾಶ್ವತ ನಿದ್ದೆಗೆ 
ಜಾರಿಬಿಡಲೇ ?

ಗೆಳತಿ

ಗೆಳತಿ 

ನಿನ್ನ ಮುಗುಳು ನಗೆಯು 
ನನ್ನ ಕಣ್ಣೋಟವನ್ನು 
ಬೇರೆಡೆಗೆ ಮರಳಿಸದಂತೆ 
ಮಾಡುತ್ತಿದೆ...